Ratings1
Average rating5
Reviews with the most likes.
ಕಾಲಕೋಶ, ಇದು ಒಂದು ವಿಶಿಷ್ಟವಾದ ಕಾದಂಬರಿ. ಇದರಲ್ಲಿ ಲೇಖಕರು ಭಾರತ ದೇಶದ ಅನೇಕ ಐತಿಹಾಸಿಕ ಘಟನೆಗಳನ್ನು ಕಥೆಯ ಮೂಲಕ ನಮಗೆ ತಿಳಿಸುತ್ತಾರೆ. ಈ ಕಾದಂಬರಿಯ ಮೂಲಕ ಬರ್ಮಾ, ಪಾಕಿಸ್ತಾನದ ಕೆಲವು ಸಂಗತಿಗಳು ಸಹ ತಿಳಿಯುತ್ತದೆ.
ತಮಿಳುನಾಡಿನ ಅಂಚಿನಿಂದ ಶುರುವಾಗುವ ನಾಯಕನ ಪಯಣ, ದೆಹಲಿಗೆ ಹೋಗಿ ಅಲ್ಲಿಂದ ಪಾಕಿಸ್ತಾನ, ಪಂಜಾಬಿನ ದುರಂತ ಕಥೆಗಳಿಗೆ ಸಾಕ್ಷಿಯಾಗಿ ಕೊನೆಗೆ ದೆಹಲಿಯಲ್ಲಾಗುವ ಘರ್ಷಣೆಯಲ್ಲಿ ಮುಗಿಯುವ ವೇಳೆಗೆ ಇಡೀ ಭಾರತದ ಇತಿಹಾಸ ಒಮ್ಮೆ ಕಣ್ಣ ಮುಂದೆ ಸುಳಿಯುವುದು.
ಈ ಎಲ್ಲ ಘಟನೆಗಳನ್ನು ಸರಿಯಾದ ಕ್ರಮ ಮತ್ತು ಲಯದಲ್ಲಿ ರೋಚಕ ಕಥೆಯ ಮೂಲಕ ನಮಗೆ ಉಣಬಡಿಸಿದ ಲೇಖಕರು ಅಭಿನಂದನಾರ್ಹರು.