93 Books
See allಕಾಲಕೋಶ, ಇದು ಒಂದು ವಿಶಿಷ್ಟವಾದ ಕಾದಂಬರಿ. ಇದರಲ್ಲಿ ಲೇಖಕರು ಭಾರತ ದೇಶದ ಅನೇಕ ಐತಿಹಾಸಿಕ ಘಟನೆಗಳನ್ನು ಕಥೆಯ ಮೂಲಕ ನಮಗೆ ತಿಳಿಸುತ್ತಾರೆ. ಈ ಕಾದಂಬರಿಯ ಮೂಲಕ ಬರ್ಮಾ, ಪಾಕಿಸ್ತಾನದ ಕೆಲವು ಸಂಗತಿಗಳು ಸಹ ತಿಳಿಯುತ್ತದೆ.
ತಮಿಳುನಾಡಿನ ಅಂಚಿನಿಂದ ಶುರುವಾಗುವ ನಾಯಕನ ಪಯಣ, ದೆಹಲಿಗೆ ಹೋಗಿ ಅಲ್ಲಿಂದ ಪಾಕಿಸ್ತಾನ, ಪಂಜಾಬಿನ ದುರಂತ ಕಥೆಗಳಿಗೆ ಸಾಕ್ಷಿಯಾಗಿ ಕೊನೆಗೆ ದೆಹಲಿಯಲ್ಲಾಗುವ ಘರ್ಷಣೆಯಲ್ಲಿ ಮುಗಿಯುವ ವೇಳೆಗೆ ಇಡೀ ಭಾರತದ ಇತಿಹಾಸ ಒಮ್ಮೆ ಕಣ್ಣ ಮುಂದೆ ಸುಳಿಯುವುದು.
ಈ ಎಲ್ಲ ಘಟನೆಗಳನ್ನು ಸರಿಯಾದ ಕ್ರಮ ಮತ್ತು ಲಯದಲ್ಲಿ ರೋಚಕ ಕಥೆಯ ಮೂಲಕ ನಮಗೆ ಉಣಬಡಿಸಿದ ಲೇಖಕರು ಅಭಿನಂದನಾರ್ಹರು.
ಅದ್ಭುತವಾದ ಕಾದಂಬರಿ. ಲೇಖಕರ ವೃತ್ತಿಯ ಹಳೆಯ ನೆನಪುಗಳು, ಮತ್ತು ಅವರ ಹವ್ಯಾಸಗಳನ್ನು ಸೇರಿಸಿ ಬರೆದ ಕಥಾನಕ ನನ್ನನ್ನು ಬೇಗ ಓದಿಸಿಕೊಂಡು ಹೋಯಿತು ಮತ್ತು ಎಲ್ಲೂ ಸಹ ನಿಧಾನವೆಂದು ಅನ್ನಿಸಲಿಲ್ಲ. ಕಲ್ಕೆರೆ ಎಂಬ ಊರಲ್ಲಿ ಅಡಗಿದ್ದ ಅನೂಹ್ಯ ಸಂಗತಿಗಳನ್ನು ಲೇಖಕರು ಅನಾವರಣಗೊಳಿಸಲು ನಡೆಸುತ್ತಿದ್ದ ಪ್ರಯತ್ನದಲ್ಲಿ ನಾವೂ ಸಹ ಭಾಗಿಯಾಗಬೇಕೆಂಬ ಬಯಕೆ ಬಂದದ್ದು ಸುಳ್ಳಲ್ಲ.
ಕಲ್ಕೆರೆ ಎಂಬ ಊರು, ಡಾ. ಕಲ್ಲೂ ರಾಯರು, ಕೆಂಚಪ್ಪ, ಅಲ್ಲಿ ನಾಯಕನು ಪ್ರಕೃತಿಯೊಂದಿಗೆ ಬೆರೆಯುವ ರೀತಿ ಇವೆಲ್ಲವೂ ತೇಜಸ್ವಿಯವರ ಕಥೆಗಳ ಮುಂದುವರೆದ ಪಾತ್ರಗಳು ಎಂಬಂತೆ ಭಾಸವಾಯಿತು. ಇದರ ಮಧ್ಯೆ ಅಬ್ಬೆ ಎಂಬ ನಿಗೂಢ ಜೇಡದ ಕಾಣದ ಪಾತ್ರ. ಲೇಖಕರಿಗಿರುವ ಕಥೆ ಹೆಣೆಯುವ ಸಾಮರ್ಥ್ಯವನ್ನು ತೋರಿಸಿತು.
ಕಾದಂಬರಿ ಮುಗಿಸಿದಾಗ ಅನ್ನಿಸಿದ್ದು ಅಬ್ಬೆ ಜೇಡದ ಬಗ್ಗೆ ಉಪಸಂಹಾರವಾಗದೇ ಇದ್ದದ್ದು. ಅದಕ್ಕಾಗಿ ಕಾದಂಬರಿಯ ನಾಯಕ ಮತ್ತೆ ಕಲ್ಕೆರೆಗೆ ಬರುವನೇ?
ಬರಲಿ ಎಂಬುದು ನನ್ನ ಆಶಯ.